2005ರ ಕರ್ನಾಟಕ ಅಧಿನಿಯಮ ಸಂಖ್ಯೆ 30
2005ರ ಡಿಸೆಂಬರ್ 15
ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆಗೆ ಮತ್ತು ಅದಕ್ಕೆ ಸಂಬಂಧಪಟ್ಟ ಇತರ ವಿಷಯಗಳಿಗಾಗಿ ಉಪಬಂಧ ಕಲ್ಪಿಸಲು ಒಂದು ಅಧಿನಿಯಮ. ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆಗೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳಿಗಾಗಿ ಮತ್ತು ಇದರಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಉಪಬಂಧ ಕಲ್ಪಿಸುವುದು ಯುಕ್ತವಾಗಿರುವುದರಿಂದ; ಭಾರತ ಗಣರಾಜ್ಯ ಐವತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ, ಎಂದರೆ:
Read full Act
(1) ಈ ಅಧಿನಿಯಮವನ್ನು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ, 2004 ಎಂದು ಕರೆಯತಕ್ಕದ್ದು.
(2) ಇದು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದ ದಿನಾಂಕದಂದು ಜಾರಿಗೆ ಬರತಕ್ಕದ್ದು ಮತ್ತು ಅಧಿನಿಯಮದ ಬೇರೆ ಬೇರೆ ಉಪಬಂಧಗಳಿಗೆ ಬೇರೆ ಬೇರೆ ದಿನಾಂಕಗಳನ್ನು ಗೊತ್ತುಪಡಿಸಬಹುದು.
ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,
(1) ಸರ್ಕಾರವು ಅಥವಾ ತಮ್ಮ ತಮ್ಮ ಅಧಿಕಾರವ್ಯಾಪ್ತಿಯೊಳಗೆ ಜಿಲ್ಲಾ ಮ್ಯಾಜಿಸ್ಟ್ರೇಟರುಗಳು ಈ ಪ್ರಕರಣದಲ್ಲಿ ಉಲ್ಲೇಖಿಸಲಾದ ದೂರಿನ ಅಥವಾ ಮೋಸದ ವ್ಯವಹಾರ ಸಂಬಂಧದಲ್ಲಿ, ಸ್ವಪ್ರೇರಣೆಯಿಂದ ಅಥವಾ ಫಿರ್ಯಾದಿಯನ್ನು ಸ್ವೀಕರಿಸಿದ ಮೇಲೆ ತನಿಖೆ ನಡೆಸುವಂತೆ ಮಾಡಬಹುದು. ಜಿಲ್ಲಾ ಮ್ಯಾಜಿಸ್ಟ್ರೇಟರು ಫಿರ್ಯಾದಿಯ ಜೊತೆಗೆ ತಮ್ಮ ವರದಿಯನ್ನು ಆದಷ್ಟು ಬೇಗನೆ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು.
(2) ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದಾಗ್ಯೂ,
(1) ಈ ಅಧಿನಿಯಮದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಸಕ್ಷಮ ಪ್ರಾಧಿಕಾರಿಯು ಅಥವಾ ಈ ಸಂಬಂಧದಲ್ಲಿ ಅವನು ಅಧಿಕರಿಸಿದ ಇತರ ಯಾವೊಬ್ಬ ಪ್ರಾಧಿಕಾರಿ, ಯಾವುದೇ ರಿಜಿಸ್ಟರು, ಪುಸ್ತಕ, ದಾಖಲೆ, ಕಾಗದಪತ್ರ, ಅರ್ಜಿಯನ್ನು, ವಿದ್ಯುನ್ಮಾನ ಮಾಹಿತಿ ಸಂಗ್ರಹಣೆ ಮತ್ತು ಮರು ಪಡೆಯುವಿಕೆ ಸಾಧನದಲ್ಲಿ ಅಥವಾ ಮಾಧ್ಯಮದಲ್ಲಿ ಮಾಹಿತಿಯನ್ನು ವಿಲೇ ಅಥವಾ ವ್ಯವಹಾರಗಳನ್ನು ಇಡಲಾಗಿದೆ ಎಂದು ನಂಬಲು ಕಾರಣವಿರುವ ಯಾವುದೇ ಆವರಣಗಳನ್ನು ಪ್ರವೇಶಿಸಲು ಮತ್ತು ಶೋಧಿಸಲು ಮತ್ತು ತಾನು ಅವಶ್ಯವೆಂದು ಭಾವಿಸುವಂತಹ ಟಿಪ್ಪಣಿಗಳನ್ನು ಮತ್ತು ಉದ್ಧೃತ ಭಾಗಗಳನ್ನು ತೆಗೆದುಕೊಳ್ಳಲು ಅಧಿಕಾರ ಹೊಂದಿರತಕ್ಕದ್ದು.
(2) ಅಂತಹ ರಿಜಿಸ್ಟರು, ಪುಸ್ತಕ, ದಾಖಲೆ, ಕಾಗದಪತ್ರ, ಅರ್ಜಿ, ವಿಲೇ ಅಥವಾ ವ್ಯವಹಾರಗಳನ್ನು ತನ್ನ ಅಭಿರಕ್ಷೆಯಲ್ಲಿ ಇಟ್ಟುಕೊಂಡಿರುವ ಅಥವಾ ನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು, ಸೂಕ್ತವಾದ ಎಲ್ಲಾ ಕಾಲಗಳಲ್ಲೂ ಅವುಗಳನ್ನು ಹಾಜರುಪಡಿಸತಕ್ಕದ್ದು ಅಥವಾ ಸಕ್ಷಮ ಪ್ರಾಧಿಕಾರಿಯು ಅಥವಾ ಸಕ್ಷಮ ಪ್ರಾಧಿಕಾರಿಯು ಅಧಿಕರಿಸಿದ ಯಾವೊಬ್ಬ ಪ್ರಾಧಿಕಾರಿಯು, ಅವುಗಳನ್ನು ತಪಾಸಣೆ ಮಾಡಲು ಮತ್ತು ತಾನು ಅವಶ್ಯವೆಂದು ಭಾವಿಸುವಂತಹ ಅವುಗಳ ಟಿಪ್ಪಣಿ ಅಥವಾ ಉದ್ಧೃತ ಭಾಗಗಳನ್ನು ತೆಗೆದುಕೊಳ್ಳಲು ಮತ್ತು ಅವಶ್ಯವಾದರೆ ಅವುಗಳನ್ನು ವಶಪಡಿಸಿಕೊಳ್ಳಲು ಮತ್ತು ಪರಿಬದ್ಧಗೊಳಿಸಲು ಅನುಮತಿಸತಕ್ಕದ್ದು:
ಪರಂತು, (ವ್ಯವಹಾರದ ಜೊತೆ ವಾಸದ ಸ್ಥಳವಾಗಿದ್ದರೆ) ಯ
(1) ಸರ್ಕಾರವು, ಈ ಅಧಿನಿಯಮದ ಉದ್ದೇಶಕ್ಕಾಗಿ "ಸಕ್ಷಮ ಪ್ರಾಧಿಕಾರಿ"ಯಾಗಿ, ಅಸಿಸ್ಟೆಂಟ್ ಕಮಿಷನರ ಹುದ್ದೆಗೆ ಕಡಿಮೆಯಲ್ಲದ ಒಬ್ಬ ಅಧಿಕಾರಿಯನ್ನು ಅಧಿಸೂಚನೆ ಮೂಲಕ ನೇಮಕ ಮಾಡತಕ್ಕದ್ದು.
(2) ಸಕ್ಷಮ ಪ್ರಾಧಿಕಾರಿಯು 3ನೇ ಪ್ರಕರಣ ಅಡಿಯಲ್ಲಿ ಮಾಡಿದ ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ, ಜಪ್ತಿಯ ಆದೇಶವನ್ನು ನಿರೂಪಕಗೊಳಿಸುವುದಕ್ಕಾಗಿ ಈ ಅಧಿನಿಯಮದ ಅಡಿಯಲ್ಲಿ ರಚಿತವಾದ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸತಕ್ಕದ್ದು.
(3) (2)ನೇ ಉಪ ಪ್ರಕರಣ ಅಡಿಯಲ್ಲಿ ಸಲ್ಲಿಸಿದ ಅರ್ಜಿಯ ಜೊತೆಯಲ್ಲಿ, 3ನೇ ಪ್ರಕರಣ ಅಡಿಯಲ್ಲಿ ಯಾವ ಕಾರಣಗಳ ಮೇಲೆ ಸದರಿ ಆದೇಶವನ್ನು ಹೊರಡಿಸಲಾಗಿದೆಯೋ ಅವುಗಳನ್ನು ತಿಳಿಸುವ ಮತ್ತು ಠೇವಣಿದಾರರಿಂದ ಅರ್ಜಿಸಲಾಗಿದೆಯೆಂದು ನಂಬಲಾದ ಹಣದ ಮೊತ್ತ ಅಥವಾ ಇತರ ಸ್ವತ್ತು ಮತ್ತು ಯಾರ ಹೆಸರಿನಲ್ಲಿ ಅಂತಹ ಸ್ವತ್ತು ಕೊಡಲಾಗಿದೆಯೋ ಅಥವಾ ಅರ್ಜಿಸಲಾಗಿದೆಯೆಂದು ನಂಬಲಾಗಿದೆಯೋ ಆ ವ್ಯಕ್ತಿಗಳ ಬಗ್ಗೆ ಅಥವಾ 3ನೇ ಪ್ರಕರಣ ಅಡಿಯಲ್ಲಿ ಜಪ್ತಿ ಮಾಡಲಾದ ಯಾವುದೇ ಇತರ ಸ್ವತ್ತಿನ ಬಗ್ಗೆ ವಿವರಗಳು ಯಾವುದಾದರೂ ಇದ್ದರೆ, ಅವುಗಳನ್ನು ತಿಳಿಸುವ ಒಂದು ಅಥವಾ ಹೆಚ್ಚು ಅಫಿಡವಿಟ್ಟುಗಳು ಇರತಕ್ಕದ್ದು.
(4) ಒಂದು ವಿಶೇಷ ನ್ಯಾಯಾಲಯ ಅಥವಾ ಪದಾಂಕಿತ ನ್ಯಾಯಾಲಯ ಅಥವಾ ನ್ಯಾಯಾಂಗ ವೇದಿಕೆಯ ಅಧಿಕಾರ ವ್ಯಾಪ್ತಿಯಲ್ಲಿರುವ ಒಂದು ಹಣಕಾಸು ಸಂಸ್ಥೆ ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಧಿಸೂಚಿಸಲಾದ ಯಾವುದೇ
(1) ನೇಮಕ ಆದೇಶವನ್ನು ಸ್ವೀಕರಿಸಿದ ಮೇಲೆ, ಸಕ್ಷಮ ಪ್ರಾಧಿಕಾರಿಯು, ತರಿತವಾಗಿ ಸಂಬಂಧಪಟ್ಟ ಹಣಕಾಸು ಸಂಸ್ಥೆಯ ಎಲ್ಲ ಹಣ ಮತ್ತು ಸ್ವತ್ತುಗಳ ವಾಸ್ತವಿಕ ಸ್ವಾಧೀನತೆಯನ್ನು ತೆಗೆದುಕೊಳ್ಳುವುದಕ್ಕಾಗಿ ಅವಶ್ಯ ಮತ್ತು ಯುಕ್ತವಾದ ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಮತ್ತು ಸಕ್ಷಮ ಪ್ರಾಧಿಕಾರಿಯು ಮೇಲ್ಕಂಡ ಉದ್ದೇಶಕ್ಕಾಗಿ ಅವಶ್ಯವಾದ ಎಲ್ಲ ಅಧಿಕಾರಗಳನ್ನು ಹೊಂದಿರತಕ್ಕದ್ದು.
(2) (1)ನೇ ಉಪ ಪ್ರಕರಣ ಅಡಿಯಲ್ಲಿ ನಿಹಿತವಾದ ಅಧಿಕಾರಗಳ ಸಾಮಾನ್ಯತೆಗೆ ಬಾಧಕವಾಗದಂತೆ, ಸಕ್ಷಮ ಪ್ರಾಧಿಕಾರಿಯು, ಈ ಅಧಿನಿಯಮದ ಉದ್ದೇಶಗಳನ್ನು ನೆರವೇರಿಸಬಹುದು ಮತ್ತು,-
(1) ತನ್ನ ನೇಮಕ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ, ಸಕ್ಷಮ ಪ್ರಾಧಿಕಾರಿಯು, ಹಣಕಾಸು ಸಂಸ್ಥೆಯ ಠೇವಣಿ ಹೊಣೆ ಮತ್ತು ಸ್ವತ್ತುಗಳ ನಿರ್ಧರಣೆ ಮಾಡತಕ್ಕದ್ದು ಮತ್ತು ಅದರ ಬಗ್ಗೆ ಒಂದು ವರದಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದು.
(2) ಆ ತರುವಾಯ ಸಕ್ಷಮ ಪ್ರಾಧಿಕಾರಿಯು, ಭದ್ರತೆ ಪಡೆದ ಸಾಲ ಕೊಟ್ಟವರು ಯಾರಾದರೂ ಇದ್ದರೆ, ಅವರಿಂದ ಮತ್ತು ಹಣಕಾಸು ಸಂಸ್ಥೆಗಳ ಠೇವಣಿದಾರರಿಂದ, ಅವರು ತಮ್ಮ ಕ್ಲೇಮುಗಳನ್ನು ಸ್ಥಾಪಿಸಲು ಸೂಕ್ತ ರುಜುವಾತಿನೊಡನೆ ಕ್ಲೇಮುಗಳನ್ನು ಸಲ್ಲಿಸುವಂತೆ ಆಹ್ವಾನಿಸಿ ವೈಯಕ್ತಿಕವಾಗಿ ಅಥವಾ ಪರಿಣಾಮಕಾರಿಯಾದ ಪ್ರಸಾರ ಮಾಧ್ಯಮದ ಮೂಲಕ ನೋಟೀಸನ್ನು ನೀಡತಕ್ಕದ್ದು.
(3) (2)ನೇ ಉಪ ಪ್ರಕರಣ ಅಡಿಯಲ್ಲಿ ಕ್ಲೇಮುದಾರರಿಗೆ ಕಳುಹಿಸಲಾದ ಅಥವಾ ಜಾರಿಗೊಳಿಸಲಾಗಿದೆಯೆಂದು ಭಾವಿಸಲಾದ, ಪ್ರತಿಯೊಂದು ನೋಟೀಸಿನಲ್ಲಿ, ನೋಟೀಸಿನ ದಿನಾಂಕದಿಂದ ಒಂದು ತಿಂಗಳ ಅವಧಿ ಮುಕ್ತಾಯವಾಗುವ ಮೊದಲು, ವಿವರ ಪಟ್ಟಿಯನ್ನು ಅಥವಾ ಕ್ಲೇಮನ್ನು ಸಕ್ಷಮ ಪ್ರಾಧಿಕಾರಿಗೆ ಕಳುಹಿಸದಿದ್ದರೆ, ಕ್ಲೇಮುಗಳನ್ನು ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸಂದಾಯ ಮಾಡಲು ಹಕ್ಕುಳ್ಳ ಕ್ಲೇಮು ಆಗಿ ಪರಿಗಣಿಸಲಾಗುವುದಿಲ್ಲವೆಂದು ತಿಳಿಸತಕ್ಕದ್ದು.
(4) ಭದ್ರತೆ ಪಡೆದ ಸಾಲ ಕೊಟ್ಟವನಿಗೆ ಕಳುಹಿಸಿದ ಪ್ರತಿಯೊಂದು ನೋಟೀಸಿನಲ್ಲಿ, ನೋಟೀಸಿನ ದಿನಾಂಕದಿಂದ ಒಂದು ತಿಂಗಳ ಅವಧಿಯ ಮುಕ್ತಾಯವಾಗುವುದಕ್ಕೆ ಮೊದಲು ಭದ್ರತಾ ಪತ್ರದ ಮೌಲ್ಯಮಾಪನ ಮಾಡಲು ಅ
7ನೇ ಪ್ರಕರಣ ಅಡಿಯಲ್ಲಿ ವರದಿಯನ್ನು ಸಲ್ಲಿಸಿದ ಮೇಲೆ ಸಕ್ಷಮ ಪ್ರಾಧಿಕಾರಿಯು, ವಸೂಲಾಡಲಾದ ಹಣದಿಂದ ಠೇವಣಿದಾರರಿಗೆ ಸಂದಾಯ ಮಾಡಲು ಅನುಮತಿ ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸತಕ್ಕದ್ದು. ಅಂತಹ ಅರ್ಜಿಯನ್ನು ಸಲ್ಲಿಸುವಾಗ, ಸಕ್ಷಮ ಪ್ರಾಧಿಕಾರವು, ಠೇವಣಿದಾರರಿಗೆ ಹೊಣೆಗಳ ಮತ್ತು ಇತರ ಹೊಣೆಗಳ ನಿರ್ಧರಣೆ ಮಾಡತಕ್ಕದ್ದು ಮತ್ತು ವಸೂಲಾಡಲಾದ ಹಣದಿಂದ ಸಂಪೂರ್ಣವಾಗಿ ಹೊಣೆಯನ್ನು ಭರಿಸಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಠೇವಣಿದಾರರಿಗೆ ಸಂದಾಯ ಮಾಡಲು ಅನುಮತಿ ಕೋರತಕ್ಕದ್ದು ಮತ್ತು ವಿಶೇಷ ನ್ಯಾಯಾಲಯದ ಆದೇಶಾನುಸಾರ ಹಣದ ಬಟವಾಡೆ ಮಾಡತಕ್ಕದ್ದು.
ಯಾವುದೇ ಹಣಕಾಸು ಸಂಸ್ಥೆಯು, ವಾಗ್ದಾನ ಮಾಡಿದಂತೆ ಅವಧಿಯ ಪೂರ್ಣಗೊಂಡ ಮೇಲೆ ಬಡ್ಡಿ, ಬೋನಸ್, ಲಾಭ ರೂಪದಲ್ಲಿ ಅಥವಾ ಇತರ ಯಾವುದೇ ರೂಪದಲ್ಲಿ ಯಾವುದೇ ಪ್ರಯೋಜನದ ಜೊತೆಗೆ ಠೇವಣಿಯ ಯಾವುದೇ ಮರುಸಂದಾಯ ಮಾಡಲು ವಂಚನೋದ್ದೇಶದಿಂದ ತಪ್ಪಿದರೆ ಅಥವಾ ಠೇವಣಿಗೆ ಪ್ರತಿಯಾಗಿ ಭರವಸೆ ನೀಡಿದಂತೆ ಸೇವೆ ಸಲ್ಲಿಸಲು ಮೋಸದಿಂದ ತಪ್ಪಿದರೆ, ಪ್ರವರ್ತಕ, ನಿರ್ದೇಶಕ, ಪಾಲುದಾರ, ವ್ಯವಸ್ಥಾಪಕನೂ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿ ಅಥವಾ ಅಂತಹ ಹಣಕಾಸು ಸಂಸ್ಥೆಯ ವ್ಯವಹಾರ ಅಥವಾ ಕಾರ್ಯಕಲಾಪಗಳ ವ್ಯವಸ್ಥಾಪನೆಗೆ ಅಥವಾ ನಡೆಸುವುದಕ್ಕೆ ಹೊಣೆಗಾರನಾದ ಯಾವೊಬ್ಬ ಇತರ ವ್ಯಕ್ತಿ ಅಥವಾ ನೌಕರನು, ದೋಷಸಿದ್ಧಿಯಾದ ತರುವಾಯ, ಆರು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಮತ್ತು ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು ಮತ್ತು ಅಂತಹ ಹಣಕಾಸು ಸಂಸ್ಥೆಯು ಸಹ ಒಂದು ಲಕ್ಷ ರೂಪಾಯಿಗಳಿಗೆ ಸಮಾನಾದ ಮೊಬಲಗಿನವರೆಗೆ ವಿಸ್ತರಿಸಬಹುದಾದ ಅಥವಾ ಅಂತಹ ಠೇವಣಿಗಳ ಮೊತ್ತದ ರೂಪದಲ್ಲಿ ಹೇಳಬಹುದಾಗಿದ್ದಲ್ಲಿ, ಹಾಗೆ ಸಂದಾಯ ಮಾಡಲು ತಪ್ಪಿದ ಮೊತ್ತದ ಎರಡು ಪಟ್ಟು, ಇವುಗಳಲ್ಲಿ ಯಾವುದು ಹೆಚ್ಚೋ ಆ ಮೊತ್ತದ ಜುಲ್ಮಾನೆಗೆ ಗುರಿಯಾಗತಕ್ಕದ್ದು.
ಪರಂತು, ವಿಶೇಷ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ವಿಶೇಷ ಮತ್ತು ಸಾಕ್ಷ್ಯ ಕಾರಣಗಳನ್ನು ದಾಖಲಿಸದೆ ಇದ್ದಲ್ಲಿ ಕಾರಾವಾಸವು ಮೂರು ವರ್ಷಗಳಿಗೆ ಕಡಿಮೆ ಇರತಕ್ಕದ್ದಲ್ಲ ಮತ್ತು ಪ್ರತಿಯೊಬ್ಬ
(1) ಈ ಅಧಿನಿಯಮದ ಉದ್ದೇಶಗಳಿಗಾಗಿ ಸರ್ಕಾರವು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಸಹಮತಿಯೊಡನೆ ಅಧಿಸೂಚನೆ ಮೂಲಕ ಅಂತಹ ಪ್ರದೇಶಕ್ಕಾಗಿ ಅಥವಾ ಪ್ರದೇಶಗಳಿಗೆ ಅಥವಾ ಪ್ರಕರಣಗಳ ಅಂತಹ ವರ್ಗಕ್ಕಾಗಿ ಅಥವಾ ವರ್ಗಗಳಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ದರ್ಜೆಗಿಂತ ಕಡಿಮೆಯಲ್ಲದ ಒಬ್ಬ ನ್ಯಾಯಾಧೀಶರನ್ನು ಒಂದು ಅಥವಾ ಹೆಚ್ಚು ವಿಶೇಷ ನ್ಯಾಯಾಲಯಗಳನ್ನು ರಚಿಸಬಹುದು.
(2) ವಿಶೇಷ ನ್ಯಾಯಾಲಯದ ಹೊರತಾಗಿ ಪ್ರೆಸಿಡೆನ್ಸಿ ಟೌನ್‌ಗಳ ದಿವಾಳಿತನ ಅಧಿನಿಯಮ, 1909ರ (1909ರ ಅಧಿನಿಯಮ 3) ಮತ್ತು ಪ್ರಾಂತೀಯ ದಿವಾಳಿತನ ಅಧಿನಿಯಮ, 1920ರ (1920ರ ಅಧಿನಿಯಮ 5) ಅಡಿಯಲ್ಲಿ ರಚಿತವಾದ ನ್ಯಾಯಾಲಯವು ಒಳಗೊಂಡಂತೆ ಇತರ ಯಾವುದೇ ನ್ಯಾಯಾಲಯವು, ಈ ಅಧಿನಿಯಮದ ಉಪಬಂಧಗಳು ಅನ್ವಯವಾಗುವ ಯಾವುದೇ ವಿಷಯದ ಸಂಬಂಧದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರತಕ್ಕದ್ದಲ್ಲ.
(3) (1)ನೇ ಉಪ ಪ್ರಕರಣ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆಯ ದಿನಾಂಕದಿಂದ ಈ ಅಧಿನಿಯಮದ ಉಪಬಂಧಗಳು ಅನ್ವಯವಾಗುವ ಯಾವುದೇ ನ್ಯಾಯಾಲಯದಲ್ಲಿ ಇತ್ಯರ್ಥದಲ್ಲಿರುವ ಯಾವುದೇ ಮೊಕದ್ದಮೆಯು ವಿಶೇಷ ನ್ಯಾಯಾಲಯಗಳಿಗೆ ವರ್ಗಾಯಿಸಲ್ಪಡತಕ್ಕದ್ದು.
(1) ವಿಶೇಷ ನ್ಯಾಯಾಲಯವು, ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವುದಕ್ಕಾಗಿ ಎಲ್ಲ ಅಧಿಕಾರಗಳನ್ನು ಹೊಂದಿರತಕ್ಕದ್ದು.
(2) (1)ನೇ ಉಪ ಪ್ರಕರಣದ ಸಾಮಾನ್ಯತೆಗೆ ಬಾಧಕವಾಗದಂತೆ, ವಿಶೇಷ ನ್ಯಾಯಾಲಯವು,
(1) 5ನೇ ಪ್ರಕರಣ ಅಡಿಯಲ್ಲಿ ಒಂದು ಅರ್ಜಿಯನ್ನು ಸ್ವೀಕರಿಸಿದ ಮೇಲೆ ವಿಶೇಷ ನ್ಯಾಯಾಲಯವು, 3ನೇ ಪ್ರಕರಣ ಅಡಿಯಲ್ಲಿ ಯಾರ ಸ್ವತ್ತನ್ನು ಜಪ್ತಿ ಮಾಡಿ ಸಕ್ಷಮ ಪ್ರಾಧಿಕಾರದಲ್ಲಿ ನಿಹಿತಗೊಳಿಸಲಾಗಿದೆಯೋ ಆ ಹಣಕಾಸು ಸಂಸ್ಥೆಗೆ ಮತ್ತು ಯಾವನೇ ಇತರ ವ್ಯಕ್ತಿ ಇದ್ದರೆ ಅವನಿಗೂ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದಂದು ಅಥವಾ ಅದಕ್ಕೆ ಮೊದಲು ಜಪ್ತಿ ಆದೇಶವನ್ನು ಏಕೆ ನಿರೂಪಕಗೊಳಿಸತಕ್ಕದ್ದಲ್ಲವೆಂಬ ಬಗ್ಗೆ ಕಾರಣವನ್ನು ತೋರಿಸಲು ಅವರನ್ನು ಕೋರಿ, ಅರ್ಜಿಯ ಪ್ರತಿಗಳು ಮತ್ತು ಅಫಿಡವಿಟ್ಟುಗಳು ಮತ್ತು ಸಾಕ್ಷ್ಯ ದಾಖಲೆ ಯಾವುದಾದರೂ ಇದ್ದರೆ ಅವುಗಳ ಸಹಿತ ಒಂದು ನೋಟೀಸನ್ನು ನೀಡತಕ್ಕದ್ದು.
(2) ವಿಶೇಷ ನ್ಯಾಯಾಲಯವು, ಹಣಕಾಸು ಸಂಸ್ಥೆಯ ಅಥವಾ (1)ನೇ ಉಪ ಪ್ರಕರಣ ಅಡಿಯಲ್ಲಿ ಯಾರಿಗೆ ನೋಟೀಸನ್ನು ನೀಡಲಾಗಿದೆಯೋ ಆ ವ್ಯಕ್ತಿಯ ಸ್ವತ್ತಿನಲ್ಲಿ ಯಾವುದೇ ಹಿತಾಸಕ್ತಿ ಅಥವಾ ಹಕ್ಕು ಇದೆಯೆಂದು ಅಥವಾ ಕ್ಲೇಮು ಮಾಡುವ ಸಂಭವವಿದೆ ಎಂದು ತನಗೆ ಮನವರಿಕೆಯಾಗುವ ಎಲ್ಲ ವ್ಯಕ್ತಿಗಳಿಗೆ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿರುವ, ದಿನಾಂಕದಂದೇ ಹಾಜರಾಗುವಂತೆ ಮತ್ತು ಸ್ವತ್ತಿನ ಅಥವಾ ಅದರ ಯಾವುದೇ ಭಾಗದ ಜಪ್ತಿಗೆ ಸಂಬಂಧಿಸಿದಂತೆ ಅಂತಹ ಸ್ವತ್ತಿನಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ಅವನು ಹಿತಾಸಕ್ತಿಯನ್ನು ಹೊಂದಿದ್ದೇನಂಬ ಆಧಾರದ ಮೇಲೆ, ಯಾವುದೇ ಆಕ್ಷೇಪಣೆ ಮಾಡಲು ಇಚ್ಛಿಸಿದರೆ, ಹಾಗೆ ಮಾಡುವಂತೆ ಕೋರುವ ನೋಟೀಸನ್ನು ಸಹ ನೀಡತಕ್ಕದ್ದು.
(3) ಜಪ್ತಿ
(1) 3ನೇ ಪ್ರಕರಣದಲ್ಲಿ ಉಲ್ಲೇಖಿಸಿರುವ ಒಂದು ಹಣಕಾಸು ಸಂಸ್ಥೆ ಅಥವಾ ಇತರ ವ್ಯಕ್ತಿಗೆ ಸೇರಿದುವು, ಜಪ್ತಿಗಾಗಿ ಲಭ್ಯವಿರುವ ಆಸ್ತಿಗಳು ಆ ಹಣಕಾಸು ಸಂಸ್ಥೆಯ ಠೇವಣಿದಾರರಿಗೆ ಮರು ಸಂದಾಯ ಮಾಡಬೇಕಾಗಿರುವ ಮೊಬಲಗು ಅಥವಾ ಮೌಲ್ಯಕ್ಕಿಂತ ಕಡಿಮೆ ಇವೆ ಎಂದು ಕಂಡುಬಂದರೆ ಮತ್ತು ಸದರಿ ಹಣಕಾಸು ಸಂಸ್ಥೆಯ ಯಾವುದೇ ಸ್ವತ್ತನ್ನು ಸದ್ಭಾವನೆಯಲ್ಲದೆ ಬೇರೆ ರೀತಿಯಲ್ಲಿ ಮತ್ತು ಸೂಕ್ತ ಪ್ರತಿಫಲಕ್ಕಾಗಿ ಅಲ್ಲದೆ ವರ್ಗಾವಣೆ ಮಾಡಿದೆಯೆಂದು (ಈ ಅಧಿನಿಯಮದ ಪ್ರಾರಂಭಕ್ಕೆ ಮುಂಚೆ ಅಥವಾ ನಂತರ) ನಂಬಲು ಯುಕ್ತ ಕಾರಣಗಳಿದ್ದವು ಎಂದು ಅಫಿಡಾವಿತ್ತಿನ ಮೂಲಕ ಅಥವಾ ಅನ್ಯಥಾ ವಿಶೇಷ ನ್ಯಾಯಾಲಯಕ್ಕೆ ಮನವರಿಕೆಯಾದರೆ, ವಿಶೇಷ ನ್ಯಾಯಾಲಯವು, ಅಂಥ ಸ್ವತ್ತಿನ ವರ್ಗಾವಣೆ ಪಡೆದ ಯಾವೊಬ್ಬ ವ್ಯಕ್ತಿಯನ್ನು (ಅವನು ಸ್ವತ್ತನ್ನು ಸದರಿ ಹಣಕಾಸು ಸಂಸ್ಥೆಯಿಂದ ನೇರವಾಗಿ ಪಡೆದಿರಲಿ ಅಥವಾ ಇಲ್ಲದಿರಲಿ) ನೋಟೀಸಿನಲ್ಲಿ ನಿರ್ದಿಷ್ಟಪಡಿಸಲಾಗುವ ದಿನಾಂಕದಂದು ಹಾಜರಾಗುವಂತೆ ಮತ್ತು ವರ್ಗಾವಣೆಯಾದ ಸ್ವತ್ತಿನ ಯುಕ್ತ ಮೌಲ್ಯಕ್ಕೆ ಸಮಾನವಾಗುವಷ್ಟು ಪ್ರಮಾಣದಲ್ಲಿ ವರ್ಗಾವಣೆ ಪಡೆದ ವ್ಯಕ್ತಿಯ ಸ್ವತ್ತನ್ನು ಏಕೆ ಜಪ್ತಿ ಮಾಡಕೂಡದು ಎಂಬುದಕ್ಕೆ ಕಾರಣ ತೋರಿಸುವಂತೆ ನೋಟೀಸಿನ ಮೂಲಕ ಅಗತ್ಯಪಡಿಸಬಹುದು.
(2) ಸದರಿ ವರ್ಗಾವಣೆ ಪಡೆದ ವ್ಯಕ್ತಿಯು, ನಿರ್ದಿಷ್ಟಪಡಿಸಿದ ದಿನಾಂಕದಂದು ಹಾಜರಾಗದಿದ್ದಲ್ಲಿ ಮತ್ತು ಕಾರಣಗಳನ್ನು ತೋರಿಸದಿದ್ದಲ್ಲಿ ಅಥವಾ 12ನೇ ಪ್ರಕರಣದ (5)ನೇ ಉಪಪ್ರಕರಣದಲ್ಲ
ಈ ಅಧಿನಿಯಮದ ಮೇರೆಗೆ ಯಾವುದೇ ಹಣಕಾಸು ಸಂಸ್ಥೆಯ ಅಥವಾ ವ್ಯಕ್ತಿಯ ಸ್ವತ್ತು ಜಪ್ತಿಯಾಗಿದ್ದರೆ ಅಥವಾ ಜಪ್ತಿಯಾಗುವುದರಲ್ಲಿದ್ದರೆ, ಅದು ಅಥವಾ ಅವನು ಯಾವುದೇ ಸಮಯದಲ್ಲಿ ಅಂಥ ಜಪ್ತಿಗೆ ಬದಲಾಗಿ ಭದ್ರತೆ ನೀಡಲು ಅನುಮತಿ ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ನೀಡಲು ಒಪ್ಪಿಕೊಂಡ ಮತ್ತು ನೀಡಲಾದ ಭದ್ರತೆಯು ತೃಪ್ತಿಕರವಾಗಿದೆ ಮತ್ತು ಸಾಕುಪ್ಟು ಇದೆ ಎಂದು ವಿಶೇಷ ನ್ಯಾಯಾಲಯವು ಅಭಿಪ್ರಾಯಪಟ್ಟರೆ ಆ ಸಂದರ್ಭಾನುಸಾರ ಜಪ್ತಿಯ ತಾತ್ಕಾಲಿಕ ಆದೇಶವನ್ನು ರದ್ದುಗೊಳಿಸಬಹುದು ಅಥವಾ ಜಪ್ತಿ ಆದೇಶವನ್ನು ಹೊರಡಿಸದೆ ಇರಬಹುದು.
ವಿಶೇಷ ನ್ಯಾಯಾಲಯವು, ಈ ಅಧಿನಿಯಮದ ಮೇರೆಗೆ ಜಪ್ತಿ ಮಾಡಲಾದ ಮತ್ತು ಸಕ್ಷಮ ಪ್ರಾಧಿಕಾರಿಯಲ್ಲಿ ನಿಹಿತವಾದ ಯಾವುದೇ ಸ್ವತ್ತಿನಲ್ಲಿ ಹಿತಾಸಕ್ತಿ ಹೊಂದಿರುವ ಯಾವೊಬ್ಬ ವ್ಯಕ್ತಿಯು ಸಲ್ಲಿಸಿದ ಅರ್ಜಿಯ ಸಂಬಂಧದಲ್ಲಿ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ಅಹವಾಲನ್ನು ಹೇಳಲು ಯುಕ್ತ ಅವಕಾಶ ನೀಡಿದ ತರುವಾಯ,
- ವಿಶೇಷ ನ್ಯಾಯಾಲಯವು ನ್ಯಾಯಸಮ್ಮತ
ಸಕ್ಷಮ ಪ್ರಾಧಿಕಾರವೂ ಒಳಗೊಂಡಂತೆ ಯಾವೊಬ್ಬ ವ್ಯಕ್ತಿಯು, ವಿಶೇಷ ನ್ಯಾಯಾಲಯದ ಆದೇಶದಿಂದ ಬಾಧಿತರಾಗಿದ್ದರೆ, ಆದೇಶದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಬಹುದು.
ಸರ್ಕಾರವು, ಅಧಿಸೂಚನೆಯ ಮೂಲಕ, ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ನಡೆಸುವ ಉದ್ದೇಶಕ್ಕಾಗಿ ಹದಿನೈದು ವರ್ಷಗಳಿಗೆ ಕಡಿಮೆ ಇಲ್ಲದಂತೆ ಅನುಭವ ಹೊಂದಿದ ನ್ಯಾಯವಾದಿಯನ್ನು ವಿಶೇಷ ಸರ್ಕಾರಿ ಅಭಿಯೋಜಕನನ್ನಾಗಿ ನೇಮಕ ಮಾಡತಕ್ಕದ್ದು.
(1) ವಿಚಾರಣೆಗಾಗಿ ಆಪಾದಿತನನ್ನು ತನಗೆ ಒಪ್ಪಿಸದೆ ಇದ್ದಾಗ್ಯೂ ವಿಶೇಷ ನ್ಯಾಯಾಲಯವು ಅಪರಾಧದ ಸಂಜ್ಞೇಯತೆಯನ್ನು ತೆಗೆದುಕೊಳ್ಳಬಹುದು ಮತ್ತು ಆಪಾದಿತ ವ್ಯಕ್ತಿಯ ವಿಚಾರಣೆ ನಡೆಸುವಾಗ ಅದು ದಂಡ ಪ್ರಕ್ರಿಯಾ ಸಂಹಿತೆ 1973ರಲ್ಲಿ (1974ರ ಕೇಂದ್ರ ಅಧಿನಿಯಮ 2ರ) ಮ್ಯಾಜಿಸ್ಟ್ರೇಟರಿಂದ ವಾರಂಟು ಮೊಕದ್ದಮೆಗಳ ವಿಚಾರಣೆಗಾಗಿ ನಿರ್ದಿಷ್ಟಪಡಿಸಿದ ಕಾರ್ಯ ವಿಧಾನವನ್ನು ಅನುಸರಿಸತಕ್ಕದ್ದು.
(2) ದಂಡ ಪ್ರಕ್ರಿಯಾ ಸಂಹಿತೆ, 1973ರ (1974ರ ಕೇಂದ್ರ ಅಧಿನಿಯಮ 2ರ) 438ನೇ ಪ್ರಕರಣದ ಉಪಬಂಧಗಳನ್ನು ಹೊರತುಪಡಿಸಿ ಸದರಿ ಸಂಹಿತೆಯ ಉಪಬಂಧಗಳು ವಿಶೇಷ ನ್ಯಾಯಾಲಯ ಮುಂದಿನ ವ್ಯವಹಾರಗಳಿಗೆ ಸಾಧ್ಯವಾಗಬಹುದಾದ ಮಟ್ಟಿಗೆ ಅನ್ವಯವಾಗತಕ್ಕದ್ದು ಮತ್ತು ಸದರಿ ಉಪಬಂಧಗಳ ಉದ್ದೇಶಗಳಿಗಾಗಿ, ವಿಶೇಷ ನ್ಯಾಯಾಲಯವನ್ನು ಪ್ರಥಮ ದರ್ಜೆ ನ್ಯಾಯ ಮ್ಯಾಜಿಸ್ಟ್ರೇಟ್ ಅಥವಾ ಸಂದರ್ಭಾನುಸಾರ ಮಹಾನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎಂಬುದಾಗಿ ಭಾವಿಸತಕ್ಕದ್ದು.
ಈ ಅಧಿನಿಯಮದಲ್ಲಿ ಅನ್ಯಥಾ ಉಪಬಂಧಿಸಿದುದನ್ನು ಹೊರತುಪಡಿಸಿ ಈ ಅಧಿನಿಯಮದ ಉಪಬಂಧಗಳು, ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಕಾನೂನಿನಲ್ಲಿ ಅಥವಾ ಯಾವುದೇ ಅಂಥ ಕಾನೂನಿನ ಬಲದಿಂದ ಪರಿಣಾಮ ಹೊಂದಿರುವ ಯಾವುದೇ ರೂಢಿ ಅಥವಾ ಆಚರಣೆ ಅಥವಾ ಯಾವುದೇ ಲಿಖಿತದಲ್ಲಿ ಅದಕ್ಕೆ ಅಸಂಗತವಾದುದು ಏನೇ ಅಡಕವಾಗಿದ್ದಾಗ್ಯೂ ಪರಿಣಾಮವುಳ್ಳದ್ದಾಗಿರತಕ್ಕದ್ದು.
ಈ ಅಧಿನಿಯಮದ ಅಡಿಯಲ್ಲಿ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯದ ಸಂಬಂಧದಲ್ಲಿ, ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರದ ಅಥವಾ ಸರ್ಕಾರದ ಒಬ್ಬ ಅಧಿಕಾರಿ ಅಥವಾ ನೌಕರನ ವಿರುದ್ಧ ಯಾವುದೇ ದಾವೆ ಅಥವಾ ಇತರ ಕಾನೂನು ವ್ಯವಹಾರಣೆ ನಡೆಸಲು ಅವಕಾಶವಿರತಕ್ಕದ್ದಲ್ಲ.
(1) ಸರ್ಕಾರವು ಅಧಿಸೂಚನೆಯ ಮೂಲಕ ಪೂರ್ವ ಪ್ರಕಟಣೆಯ ತರುವಾಯ ಈ ಅಧಿನಿಯಮದ ಉದ್ದೇಶಗಳನ್ನು ಈಡೇರಿಸಲು ನಿಯಮಗಳನ್ನು ರಚಿಸಬಹುದು.
(2) ಈ ಅಧಿನಿಯಮದ ಅಡಿಯಲ್ಲಿ ಮಾಡಲಾದ ಪ್ರತಿಯೊಂದು ನಿಯಮವನ್ನು ಅದನ್ನು ರಚಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನಮಂಡಲದ ಪ್ರತಿಯೊಂದು ಸದನ ಮುಂದೆ ಒಂದು ಅಧಿವೇಶನದಲ್ಲಿ ಅಥವಾ ಎರಡು ಅಥವಾ ಹೆಚ್ಚು ನಿರಂತರ ಅಧಿವೇಶನಗಳಲ್ಲಿ ಅಡಕವಾಗಿರಬಹುದಾದ ಒಟ್ಟು ಮೂವತ್ತು ದಿನಗಳ ಅವಧಿವರೆಗೆ ಅದು ಅಧಿವೇಶನದಲ್ಲಿರುವಾಗ ಮಂಡಿಸತಕ್ಕದ್ದು ಮತ್ತು ಹಾಗೆ ಮಂಡಿಸಲಾದ ಅಧಿವೇಶನ ಅಥವಾ ನಿಕಟೋತ್ತರ ಅಧಿವೇಶನಗಳು ಮುಕ್ತಾಯವಾಗುವ ಮೊದಲು ಉಭಯ ಸದನಗಳು ನಿಯಮದಲ್ಲಿ ಯಾವುದೇ ಮಾರ್ಪಾಡು ಮಾಡಬೇಕೆಂದು ಒಪ್ಪಿದರೆ ಅಥವಾ ನಿಯಮವನ್ನು ಮಾಡಬಾರದೆಂದು ತೀರ್ಮಾನಿಸಿದರೆ ತದನಂತರ ಆ ನಿಯಮವು ಆ ನಿಯಮದ ಅಡಿಯಲ್ಲಿ ಈ ಮುಂಚೆ ಮಾಡಲಾದ ಯಾವುದರ ಮಾನ್ಯತೆಗೂ ಪ್ರತಿಕೂಲವಾಗದಂತೆ ಸಂದರ್ಭಾನುಸಾರ ಮಾರ್ಪಾಡಾದ ರೀತಿಯಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ಕದ್ದಲ್ಲ. ಹಾಗಿದ್ದರೂ ಅಂಥ ಯಾವುದೇ ಮಾರ್ಪಾಡು ಅಥವಾ ರದ್ದತಿಯು ಆ ನಿಯಮದ ಅಡಿಯಲ್ಲಿ ಈ ಹಿಂದೆ ಮಾಡಲಾದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧೆ ಉಂಟು ಮಾಡತಕ್ಕದ್ದಲ್ಲ.
ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯಗತಗೊಳಿಸುವಲ್ಲಿ ಯಾವುದೇ ತೊಂದರೆಯು ಉದ್ಭವಿಸಿದರೆ, ಸರ್ಕಾರವು, ಸಂದರ್ಭಾನುಸಾರ, ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಲ್ಲದ, ತೊಂದರೆಗಳನ್ನು ನಿವಾರಿಸಲು ಅವಶ್ಯವೆಂದು ತನಗೆ ಕಂಡುಬಂದಂಥ ಏನೇನಾದರೂ ಆದೇಶದ ಮೂಲಕ ಮಾಡಬಹುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಜಿ.ಕೆ. ಬೋರೇಗೌಡ, ಸರ್ಕಾರ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.
ಕರ್ನಾಟಕ ಸರ್ಕಾರ
ಸಂಖ್ಯೆ: ಆಇ 44 ಟಿಎಆರ್ 2006
ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 17.05.2006.
ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ ಸಂಖ್ಯೆ 30) 1ನೇ ಪ್ರಕರಣ (2)ನೇ ಉಪ-ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ಸದರಿ ಅಧಿನಿಯಮದ ಎಲ್ಲಾ ಉಪಬಂಧಗಳು ದಿನಾಂಕ: 17ನೇ ಮೇ 2006 ರಂದು ಜಾರಿಗೆ ಬರತಕ್ಕದ್ದೆಂದು ಗೊತ್ತುಪಡಿಸುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, (ಸಿ. ಶಾಮ್‌ರಾವ್), ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ).
Elevate your legal practice with advanced AI-driven research and drafting solutions. Experience unmatched efficiency, precision, and security, tailored exclusively for legal professionals.